ವಿನಾಯಕ ಭಟ್ ಮೂರೂರು ಅವರೇ,
ನಿನ್ನೆ ನಿಮ್ಮ "ಜುಗಲ್ ಬಂದಿ" ಕಾರ್ಯಕ್ರಮವನ್ನು ನೋಡಿದೆ. ನಿಮ್ಮ ಅಭಿಪ್ರಾಯವನ್ನು ನೀವು ಹೇಳಿದ ರೀತಿ ಇಷ್ಟವಾಗಲಿಲ್ಲ. ನೀವು ಹೇಳಿದಿರಿ "ಆಹಾರ ಪದ್ಧತಿ ಒಬ್ಬನ ಖಾಸಗಿ ವಿಷಯ, ಯಾವುದನ್ನು ತಿನ್ನಬೇಕು, ಬಿಡಬೇಕು ಎನ್ನುವುದನ್ನು ಅವನೇ ತೀರ್ಮಾನಿಸಿಕೊಳ್ಳುತ್ತಾನೆ. ಯಾರೂ ಕಟ್ಟು ಹಾಕುವ ಅವಶ್ಯಕತೆಯಿಲ್ಲ" ಎಂದು.
ಹಾಗಾದರೆ "ಗೋವಧೆ"ಯನ್ನು ನಿಷೇಧಿಸಬೇಕು, ಗೋಮಾಂಸ ಭಕ್ಷಣೆಯನ್ನು ನಿಷೇಧಿಸಬೇಕೆಂದು ಏಕೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ? ಗೋಮಾಂಸವನ್ನು ತಿನ್ನಬೇಕೋ ಬಿಡಬೇಕೋ ಎನ್ನುವುದು ಒಬ್ಬನ ಖಾಸಗಿ ವಿಷಯ, ಅದಕ್ಕೇಕೆ ಕಟ್ಟು ಹಾಕಲು ಬೊಬ್ಬೆ ಹೊಡೆಯಲಾಗುತ್ತಿದೆ?
ಮಾಧ್ಯಮಗಳಲ್ಲಿ ಯಾವುದನ್ನು ನೋಡಬೇಕು, ಬಿಡಬೇಕು ಎನ್ನುವುದನ್ನು ಖಾಸಗಿ ಮನುಷ್ಯ ತೀರ್ಮಾನಿಸಿಕೊಳ್ಳುತ್ತಾನೆ. ಅದಕ್ಕೇಕೆ ಸೆನ್ಸಾರ್ ಬೋರ್ಡ್ ಮಾಡಿಕೊಳ್ಳಲಾಗಿದೆ? ನೈತಿಕ ನಿಯಮಗಳನ್ನೇಕೆ ಹೇರಲಾಗುತ್ತಿದೆ?
ನಾನು ಸಹಪಂಕ್ತಿ ಭೋಜನದ ಪರವಾಗಿಯೂ ಮಾತನಾಡುತ್ತಿಲ್ಲ, ವಿರೋಧವಾಗಿಯೂ ಅಲ್ಲ. ನೀವು ಹೇಳಿದ ಮಾತುಗಳಿಗಷ್ಟೇ ನನ್ನ ಆಕ್ಷೇಪಣೆ. ನೀವು ಹೇಳಬೇಕೆಂದಿರುವ ವಿಷಯವನ್ನು ಬೇರೆ ರೀತಿಯಲ್ಲಿ ಹೇಳಬಹುದಾಗಿತ್ತೇನೋ? ಯೋಚಿಸಿ.
No comments:
Post a Comment