Friday, December 30, 2011

ಬಿಂಬ

ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಿಕೊಂಡರೆ ನಾವೇ ಕಾಣುತ್ತೇವೆ ಎನ್ನುವುದು ನಮ್ಮ ನಂಬಿಕೆ. ಆದರೆ ಕನ್ನಡಿಯಲ್ಲಿ ನಮ್ಮ ಬಲ ಎಡವಾಗಿ ಕಾಣಿಸುತ್ತದೆ. ಬಲಗೈ ಎಡಗೈ ಆಗಿಯೂ ಎಡಗೈ ಬಲಗೈ ಆಗಿಯೂ ಕಾಣಿಸುತ್ತದೆ. ಹಾಗಾದರೆ ನಿಜವಾಗಿಯೂ ಅದು ನಮ್ಮ ನಿಜವಾದ ಬಿಂಬವೇ? ನಮ್ಮ ಭ್ರಮೆಯೇ?

Thursday, December 29, 2011

ದನಗಾವಲು

"ದನ ಕಾಯಲು ಹೋಗು" ಎಂದು ಏನಾದರೂ ದಡ್ಡ ಕೆಲಸ ಮಾಡಿದಾಗ ಬಯ್ಯುವುದು ವಾಡಿಕೆ. ದನಕಯುವುದೇನು ಸದರೆ? ನಿಕ್ರಷ್ಟವೆ? ಅಲ್ಲಾ ಅದೇನು ಬಾಳೆ ದಿಂಡು ಕಡಿದಷ್ಟು ಸುಲಭ ಸಾದ್ಯವೇ?  ಅದಕ್ಕೆಷ್ಟು ಏಕಾಗ್ರತೆ, ವೇಗ, ಚುರುಕು ಬೇಕು ಎಂಬುದು ಸಾರಾಸಗಟಾಗಿ ತಳ್ಳಿಹಾಕುವ ವಿಚಾರವಲ್ಲ. ಏಕಾಗ್ರತೆಯೂ ಬೇಕು ಒಂದೇ ಸಲ ನಾಲ್ಕೆಂಟು ಕಡೆ ಕಣ್ಣು ಹಾಯಿಸುವಷ್ಟು ಚುರುಕುತನವೂ ಬೇಕು. ದನಗಳು ಚೆಲ್ಲಾಪಿಲ್ಲಿಯಾಗಿ ಒಡ ಹೊರಟರೆ ಯಾವಕಡೆಯಿಂದ, ಹೇಗೆ, ಯಾವಾಗ ಯಾವ ಆಕಳನ್ನು ಅಡ್ಡಗಟ್ಟಿದರೆ ಹಿಡಿತ ಸಾಧಿಸಬಹುದು ಎನ್ನುವ ಸೂಕ್ಷ್ಮ ವಿವೇಚನಾ ಬುದ್ಧಿಯಿರಬೇಕು.

ಆಕಳುಗಳು ಮುಂದೆ ಹೋದುವೇ, ಹೋದರೆ ಎಷ್ಟು ಮುಂದೆ ಹೋದುವು, ಎಮ್ಮೆ ಗೇವಿನ ಆಕಳು ಹಿಂದಿದೆಯೇ, ಸಾಮಾನ್ಯವಾಗಿ ಎಮ್ಮೆಗಳು ಮೇಯುವುದು ನಿಧಾನ,ಅವೆಲ್ಲಿವೆ ಎಂದೆಲ್ಲಾ ಹತ್ತು ಹಲವು ಯೋಚನೆಗಳನ್ನು ಒಂದೇ ಸರ್ತಿ ಮಾಡುವ ಗುಣವೇನು ಕಡಿಮೆಯೇ?

ದನ ಕಾಯುವುದು ಕೇವಲ ದೈಹಿಕ ಶ್ರಮ ವಿನಿಯೋಗಿಸಿ ಮಾಡುವ ಕೆಲಸವೆಂದೇ ಎಲ್ಲರೂ ಭಾವಿಸಿದ್ದಾರೆ. ದೈಹಿಕ ಶ್ರಮದೊಂದಿಗೆ ಬೌಧ್ಧಿಕ ಶ್ರಮವೂ ಬೇಕೇಬೇಕು. ಬೌಧ್ಧಿಕ ಚಿಂತನೆಗೆ ಸಮಯವೂ ದೊರೆಯುತ್ತದೆ. ಪಾರಮಾರ್ಥಿಕ ಚಿಂತನೆಗಳನ್ನೂ ಮಾಡಬಹುದು ಎಂಬುದಕ್ಕೆ ಉದಾಹರಣೆಯೂ ಇದೆ.

"ಮಲ್ಲ" ಎನ್ನುವ ದನಕಾಯುವವನನ್ನು ನೋಡಿ ನಾನು ಎಸ್ಟೋ ಸಲ ಆಶ್ಚರ್ಯ ಪಟ್ಟದ್ದಿದೆ. ಅವನ ಆಯುಷ್ಯದಲ್ಲಿ ದನಕಾಯುವುದನ್ನು ಬಿಟ್ಟು ಬೇರೇನನ್ನೂ ಮಾಡದೇ ಅವನು ಆಧ್ಯಾತ್ಮಿ ಆಗಿದ್ದನೆಂದೇ ನನ್ನ ನಂಬಿಕೆ. ಇಹ ಲೋಕದ ಅನೇಕ ಸಂಗತಿಗಳು ಅವನಿಗೆ ತುಚ್ಚವಾಗಿದ್ದುವು. ಯಾವಾಗಲಾದರೂ ಅವನು ಸಿಕ್ಕಾಗ ಸಮಯವು ಎಷ್ಟು ಆಗಿರಬಹುದೆಂದು ಕೇಳಿದರೆ ೧, ೨, ೩, ೪ ಆಗಿರಬಹುದು ಎಷ್ಟು ಆದರೆ ನನಗೇನು ಎನ್ನುತ್ತಿದ್ದ. ಕೇಶಜ್ಜನ ಹತ್ತಿರ ಸಂಬಳ ಚೌಕಾಶಿ ಮಾಡುವಾಗ ದಿನಕ್ಕೆ ೨೦ ರೂಪಾಯಿ ಕೊಡುತ್ತೇನೆ ಎಂದು ಅವರೆಂದರೆ ಇವನು ನಾನು ಈ ಸಂಬಳಕ್ಕೆ ಕೆಲಸ ಮಾಡಲಾರೆ ಎನ್ನುತ್ತಿದ್ದ. ಈ ತುಟ್ಟಿಯ ಕಾಲದಲ್ಲಿ ನೀವು ಕೊಡುವುದು ಕಡಿಮೆ, ಕೊನೇ ಪಕ್ಷ ೧೫ ರೂಪಾಯಿ ಆದರೂ ಕೊಡಿ ಎನ್ನುತ್ತಿದ್ದ. ಅವನ ವೈರಾಗ್ಯಕ್ಕೆ ಇನ್ನೂ ಸಾಕ್ಷಿ ಬೇಕೇ? 

Wednesday, December 28, 2011

ಶ್ರವಣಘಾತಕ ಕೃತ್ಯ

             ನಮ್ಮೂರಿನಲ್ಲೊಬ್ಬರಿಗೆ ಮಾತನಾಡುವಾಗ ಉದಾಹರಣೆಗಳನ್ನು ಕೊಡುವ ವಿಪರೀತ ಚಟ. ಮಾತು ಮಾತಿಗೂ ಏನಾದರೊಂದು ಉದಾಹರಿಸದಿದ್ದರೆ ಅವರಿಗೆ ಏನಾಗುವುದೋ ಗೊತ್ತಿಲ್ಲ. ಕೆಲವೊಂದು ಉದಾಹರಣೆಗಳು ಸಾಂದರ್ಭಿಕವಾಗಿದ್ದರೆ ಬಹಳಷ್ಟು ಅಸಂಬದ್ದ. ಅವರು ಸಂಸ್ಕ್ರತ, ಶಾಸ್ತ್ರ, ಪುರಾಣ ಮತ್ತು ಸಾಹಿತ್ಯಗಳನ್ನು ತುಂಬಾ ಓದಿಕೊಂಡಿರುವುದಕ್ಕೋ ಏನೋ ಬಹಳಷ್ಟು ಉದಾಹರಣೆಗಳು ಪ್ರಾರಂಭವಾಗುವುದೇ "ಮಹಾಭಾರತದ ...... ಸಮಯದಲ್ಲಿ..." ಅಂತ. ನನಗೋ, ಅವರು ರಾಮಾಯಣ, ಮಹಾಭಾರತದ ಉದಾಹರಣೆಗಳನ್ನು ಕೊಡಲು ಮುಂದಾದಾಗ ಇವರಿಗೆ ವಯಸ್ಸು ಸುಮಾರು ಎಷ್ಟು ಶತಮಾನಗಳಿರಬಹುದು ಎಂಬ "ಜಿಜ್ಞಾಸೆ" ತೊಡಗುತ್ತದೆ.

            ಊರಿನ ಬಹಳಷ್ಟು ಜನ ಅವರ ಹತ್ತಿರ ಮಾತನಾಡುವುದಕ್ಕೆ ಹೆದರುತ್ತಾರೆ ಏಕೆಂದರೆ ಅವರು ಸಮಯ ಸಂದರ್ಭ ನೋಡದೆ ಮಾತನಾಡಲು ತೊಡಗುತ್ತಾರೆ. ಮಾತನಾಡಲು ಇಂತಹ ವಿಷಯವೇ ಆಗಬೆಕೆನ್ದೆನೂ ಇಲ್ಲ, ಅನಲೇ ಕಾಯಿಂದ ಹಿಡಿದು ಭಗವದ್ಗೀತೆಯವರೆಗೂ ಎಲ್ಲೆಂದರಲ್ಲಿ ಮಾತನಾಡುವ ಚಾಕಚಕ್ಯತೆ ಅವರಿಗೆ ಮೊದಲಿಂದಲೂ ಸಿದ್ದಿಸಿದೆ ಎಂಬುದು ಹಲವು ಮದ್ಯವಯಸ್ಕರ ಅಂಬೋಣ.

        ಈಗೀಗ ಅವರಿಗೆ ಮಾತನಾಡಲು ಯಾರೂ ಸಿಗುವುದಿಲ್ಲ ಎಂತಲೇ ಅಪೂರ್ವಕ್ಕೆ ಸಿಕ್ಕ ಯಾರಿಗಾದರೂ ಎಡಬಿಡದೆ ಹಲವು ವಿಷಯಗಳನ್ನು ಊದಿ ಹುಡಿ ಹಾರಿಸಿಬಿಡುತ್ತಾರೆ. ಊರಿನ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅವರ ಪಕ್ಕ ಕೂತು ಎಲೆಯಡಿಕೆ ಹಾಕಲೂ ಅಡಿಕೆ ಮರ ಏರುವಾಗ ಹಪ್ರೇನಾವು ಕಂಡಷ್ಟು ಹೆದರುತ್ತಾರೆ.

       ಕೆಲವು ದಿನಗಳ ಹಿಂದೆ ನನ್ನೊಬ್ಬ ಗೆಳೆಯನಿಗೆ ಅದಾವುದೋ ಹಳೆಯ ಸಾಹಿತ್ಯಕಾರರ ಕೃತಿಗಳ ಬಗ್ಗೆ ಏನೋ ಸಂದೇಹವು ಉಂಟಾದಾಗ ಪರಿಹಾರ ಮಾರ್ಗ ಒಂದೇ ಒಂದಿದೆ ಎಂದ ಅದೂ ನಿನ್ನೋಬ್ಬನಿಂದ ಮಾತ್ರ ಸಾದ್ಯ ಎಂದ. ನಾನೂ ಉತ್ಸುಕನಾಗಿ ಯಾವ ಮಾರ್ಗ ಎಂದು ಕೇಳಿದಾಗಲೇ ನನಗೆ ಗೊತ್ತಾದದ್ದು, ಹೌಹಾರಿದ್ದು. ನನ್ನ ಗೆಳೆಯನಿಗೆ ಇಂತಹ ಭಯೋತ್ಪಾದಕ ಯೋಚೆನೆಗಳೂ ಇವೆ ಎಂದು. ಅವನು ಹೇಳಿದ್ದೆಂದರೆ ನಮ್ಮೂರಿನಲ್ಲಿ ವಿಶ್ವ ವಿಖ್ಯಾತರಾಗಿರುವವರ ಹತ್ತಿರ ಅವನ ಸಂದೇಹಕ್ಕೆ ಉತ್ತರ ಕೇಳು ಎಂಬುದಾಗಿತ್ತು. ಎರಡು ಕಿವಿ ಸರಿಯಾಗಿರುವವರಾರೂ ಇಂತಹ ಶ್ರವಣಘಾತಕ ಕೆಲಸಕ್ಕೆ ಕಿವಿ ಕೊಟ್ಟಾರೆ?

ತಳಮಳ!!

ಹೇಗಿದೆ ಜೀವನ?

ಕುಂತಿ ಮತ್ತು ಮಾದ್ರಿ ಸುತರಾದ ಪಾಂಡವರು ೧೨ ವರುಷ ವನವಾಸವನ್ನು ಮುಗಿಸಿ ೧ ವರ್ಷದ ಅಜ್ಞಾತವಾಸವನ್ನು ಕಳೆಯುವುದಕ್ಕೋಸ್ಕರ ವಿರಾಟರಾಜನ ಅಸ್ಥಾನದಲ್ಲಿ ವಿವಿಧ ಮಾರುವೇಷಗಳನ್ನು ತೊಟ್ಟು ಕೆಲಸಗಾರರಾಗಿ ಸೇರಿಕೊಂಡಿರುವಾಗ ಸೈರಂದ್ರಿ ಎಂಬ ಹೆಸರಿನಲ್ಲಿರುವ ದ್ರೌಪದಿಯನ್ನು ಕೀಚಕನು ಛೇಡಿಸಿದಾಗ ವಲಲ ಎಂಬ ಹೆಸರಿನಲ್ಲಿ ಅಡುಗೆ ಭಟ್ಟನಾಗಿ ವಿರಾಟ ರಾಜನ ಭೋಜನ ಶಾಲೆಯಲ್ಲಿರುವ ಭೀಮನಿಗೆ ಅಕ್ರೋಶ ಉಂಟಾದಾಗ ಧರ್ಮರಾಯನಿಗೆ ತಳಮಳ ಉಂಟಾಗುತ್ತದೆಯಲ್ಲವೇ ಹಾಗಿದೆ.!!!

ಅಧರ್ಮ

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಮ್ |
ಅಭ್ಯುತ್ತಾನಮಧರ್ಮಸ್ಯ ಸಂಭವಾಮಿ ಯುಗೇ ಯುಗೇ |

ಕೀನ್ಯಾದಲ್ಲಿ ಅಧರ್ಮ ಸಂಭವಿಸಿದರೆ?

Lahari

ಸತ್ಯಕ್ಕೆ ಎರಡು ಮುಖಗಳಿರಬಹುದೇ? ನಾವು ನಂಬಿರುವ ವಿಷಯ ನಮಗೆ ಸತ್ಯ, ನಂಬಿರುವವರೆಗೂ. ನಮಗೆ ಸತ್ಯವಾಗಿ ಕಾಣುವ ವಿಷಯ ಇನ್ನೊಬ್ಬರಿಗೆ ಸತ್ಯವಲ್ಲದೇ ಹೊಗಿರಲೂಬಹುದು. ಏಕೆಂದರೆ ಅವು ಅದನ್ನು ನಂಬಿಲ್ಲದೆ ಹೋಗಿರಬಹುದು. ಸತ್ಯವು ಎಷ್ಟು ನಿಜವೋ ಅಸ್ಟೇ ಗೊಂದಲಮಯ.. ಸತ್ಯವನ್ನು ಹೇಳಬೇಕಾದರೆ "ನಾನು ನಂಬಿರುವ ಸತ್ಯವನ್ನು ಹೇಳುತ್ತಲಿದ್ದೇನೆ" ಎನ್ನಬೇಕೆ?