ಜೀವನದಲ್ಲಿ ಎಲ್ಲರಿಗೂ "ಆನೆ" ಇರಬೇಕಂತೆ. "ಆ" ಅಂದರೆ "ಆರೋಗ್ಯ", "ನೆ" ಅಂದರೆ "ನೆಮ್ಮದಿ". ಮೊನ್ನೆ ಕನ್ನಡದ ಕೋಟ್ಯಾಧಿಪತಿ ನೋಡುವಾಗ ಯಾರೋ ಸ್ಫರ್ದಿ ಹೇಳಿದ ಮಾತಿದು. ಉಂಡು ಮಲಗಿದಾಗ ನನಗೂ ಅನ್ನಿಸಿತು, ಎಲ್ಲರಿಗೂ "ತುತು" ಇರಬೇಕೆಂದು. "ತು" ಅಂದರೆ "ತುಂಬುಹೊಟ್ಟೆ", "ತು" ಅಂದರೆ "ತುರಿಕೆ". ಯಾರಿಗಾದರೂ ಕೇಳಿನೋಡಿ ನಿನ್ನ ಸಂತೋಷದ ಕ್ಷಣ ಯಾವುದು ಎಂದು. ನಾನು ಪರೀಕ್ಷೆ ಪಾಸಾಗಿದ್ದು ಎಂತಲೋ, ಪಕ್ಕದ ಊರಿನ ಕೂಸಿನ ಮದುವೆಯಲ್ಲಿ ಮದುಮಗನ ಜೊತೆ ಫೋಟೋ ತೆಗೆಸಿಕೊಂಡದ್ದು ಎಂತಲೋ ಯೋಚನೆ ಮಾಡಿ ಹೇಳುತ್ತಾರೆ. ಆದರೆ ಬೆನ್ನಿನ ಮೇಲೆ ಕೈ ಮುಟ್ಟದ ಜಾಗ ತುರಿಸಿದಾಗ ಎರಡೂ ಕೈಯಲ್ಲಿ ಜನಿವಾರವನ್ನು ಆಡಿಸಿ, ಅಥವಾ ಗೋಡೆಯ ಅಂಚಿಗೆ ಬೆನ್ನು ತಿಕ್ಕಿ ತುರಿಕೆಯನ್ನು ನಿವಾರಿಸಿಕೊಂಡಾಗ ಆಗುವ ಸಂತೋಷವನ್ನು ಯಾರೂ ಹೇಳುವುದಿಲ್ಲ. ಆ ಕ್ಷಣ ತುಂಬಾ ಸಂತೋಷವನ್ನ ಆನಂದವನ್ನ ಅನುಭವಿಸಿರುತ್ತೇವೆ. ಹೌದೋ ಅಲ್ಲವೋ?
ಚ೦ದದ ಬರಹಗಳಿವೆ ನಿಮ್ಮ ಬ್ಲಾಗಿನಲ್ಲಿ. ತಿಳಿಹಾಸ್ಯ ಬೆರೆತು ಓದುಗರ ಮುಖ ಹಸನ್ಮುಖವಾಗುವುದರಲ್ಲಿ ಎರಡು ಮಾತಿಲ್ಲ..:) ಮು೦ದುವರೆಸಿ..
ReplyDeleteವ೦ದನೆಗಳು..
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನನಗೆ ಟಾನಿಕ್.
Delete:) super!
ReplyDeleteಹೌದೋ ಹೌದು.... ಇದರ ಜೊತೆಗೆ ಹಂಡೆ ನೀರು ಮಿಂದ ಪ್ರಸಂಗವೂ ನೆನಪಾಗ್ತು.. (ಮುಂಚೆ ನೀನೆ ಈ ಬ್ಲಾಗ್ನಲ್ಲಿ ಬರದ್ದೆ..!)
ReplyDeleteIts Superb!!..
ReplyDelete