ಬಹಳ
ದಿನಗಳ ನಂತರ, ದಿನಗಳೇನು ವರ್ಷಗಳ ನಂತರ ನನ್ನ ಹಳೆಯ ಹವ್ಯಾಸವಾದ ಚಿತ್ರ ಬಿಡಿಸುವುದು, ಕರಕುಶಲ ವಸ್ತು ಮಾಡುವುದು ಪ್ರಾರಂಭಿಸಿದೆ. ಮತ್ತೆ ಪ್ರಾರಂಭಿಸುವುದಕ್ಕೆ ವಿನುತಾಳ ಒತ್ತಾಯ ಮೂಲ ಕಾರಣ. ಅವಳ ಸಲಹೆ, ಮೂಲ ಯೋಚನೆಯೊಂದಿಗೆ ಪುನಃ ಪ್ರಾರಂಭವಾದ ಹವ್ಯಾಸ ಈಗ ದಿನಾ ಮುಂದುವರೆದಿದೆ.
ಪೂರ್ತಿಯಾಯಾಗಿ ಹವ್ಯಾಸಗಳನ್ನೆಲ್ಲ ಮರೆತು ಸಂಪೂರ್ಣವಾಗಿ ದಿನಗೆಲಸ ಮಾಡುವ ಯಂತ್ರಮಾನವನೇ ಆಗಿಹೋಗಿದ್ದೇನೆ ಎಂಬ ನನ್ನ ಭ್ರಮೆಯನ್ನು ನಿವಾಳಿಸಿದ ಶ್ರೇಯ ವಿನುತಾಳಿಗೆ.
ಯಾರೋ
ಮಾಡಿದ ರಾತ್ರಿ ದೀಪವನ್ನು ನೋಡಿ "ನೀನೂ ಯಾಕೆ ಅದನ್ನೊಂದು ಮಾಡಬಾರದು?" ಎಂಬ ಮೊದಲ ಒತ್ತಾಯ ಸುಮಾರು ದಿನ ಅಪ್ಪಳಿಸಿದ ಮೇಲೆ ನಾನೂ ಮನಸ್ಸು ಮಾಡಿದೆ. youtube.com ನೋಡಿ ಹೇಗೆ ಮಾಡುವುದೆಂದು ತಿಳಿದೆ. ಒಂದು ಕಟ್ಟು ಸೊಣಬೇದಾರ, ಬಲೂನು, ಅಂಟನ್ನು ತಂದು "ರಾತ್ರಿ ದೀಪ" ಮಾಡಿದ ಮೇಲೆ, ಅದನ್ನು ನೋಡಿ ಭ್ರಮ ನಿರಾಸನವಾಗುವ ಪ್ರಸಂಗವನ್ನು ಸ್ವಲ್ಪದರಲ್ಲಿ ತಪ್ಪಿಸಿದೆ. ಬಲೂನಿಗೆ ಸುತ್ತಿದ ಸೊಣಬೇದಾರವನ್ನು ಹಕ್ಕಿಯ ಗೂಡನ್ನಾಗಿ ಪರಿವರ್ತಿಸಿ ಮಾನ ಉಳಿಸಿಕೊಂಡೆ.
ಒಂದು
ಪ್ರಯತ್ನವಾದ ಮೇಲೆ ಮಾಡಬಹುದೆಂಬ ಆತ್ಮವಿಶ್ವಾಸದಲ್ಲಿ ಕೈಗೆ ಸಿಕ್ಕ ದಾರವನ್ನೆಲ್ಲ ಉಪಯೋಗಿಸಿ ಒಂದು ರಾತ್ರಿ ದೀಪವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಮನೆಯಲ್ಲಿ ಔಷಧಿಗೆ ಬೇಕು ಅಂದರೂ ಒಂದು ದಾರವೂ ಉಳಿಯಲಿಲ್ಲ. ಯಶಸ್ವಿಯಾದ ದೀಪ ಸರಿಯಾದ ಆಕಾರದಲ್ಲಿ ನಿಲ್ಲದೇ ಹೋದದ್ದರಿಂದ ಒಂದು ದೊಡ್ಡ ಪ್ಲಾಸ್ಟಿಕ್ ಬಾಲ್ ತಂದು ಅದಕ್ಕೆ ದಾರವನ್ನು ಸುತ್ತಿ ಒಂದು ಸರಿಯಾದ ದೀಪ ಮಾಡಿದೆ, ಇದು ಸಮಾಧಾನ ಕೊಟ್ಟಿತು, ನನಗೋ? ವಿನುತಾಳಿಗೋ?
youtube.com ನೋಡುವಾಗ
ಕಾಗದದ ಕಲಾಕೃತಿ ನೋಡಿದೆ. ಅದನ್ನೂ ಮಾಡಿದೆ. ಆದರೆ ಬಣ್ಣ ಬಳಿಯುವಾಗ ಎಡವಿದೆ. ಹಳೆಯ ಬಣ್ಣದ ಖಜಾನೆ ತೆಗೆದು ನೋಡಿದರೆ ಎಲ್ಲ ಬಣ್ಣಗಳೂ ಒಣಗಿ ತೊಗರು ಬಾನಿಯ ತಳದಲ್ಲಿ ಕೂತ ಗಶಿಯಂತೆ ಕಂಡಿತು. ಅದಕ್ಕೆ ನೀರು ಹಾಕಿ ಕರಡಿ ಕಲಾಕೃತಿಗೆ ಬಳಿದೆ. ತೀರೇ ಚೆಂದ ಕಾಣದಿದ್ದರೂ ತಕ್ಕಮಟ್ಟಿಗೆ ಗೋಡೆಗೆ ತೂಗು ಹಾಕಬಹುದು.
ಯಕ್ಷಗಾನದ
ಕಿರೀಟ ಯಾವತ್ತಿಗೂ ಒಂದು ಆಕರ್ಷಣೆಯ ಕಲಾಕೃತಿ ನನಗೆ. ಅದನ್ನು ಮಾಡುವ ಪ್ರಯತ್ನದಲ್ಲಿ ಬಾಶಿಂಗ ಮಾಡಿದೆ. ರಟ್ಟಿನ ಬಾಕ್ಸ್, ಪ್ಲಾಸ್ಟಿಕ್ ಕರಡಿಗೆ, ಕಾಗದ, ಹೊಳೆಯುವ ಬಟ್ಟೆ ಎಲ್ಲ ಉಪಯೋಗಿಸಿ ಕಿರೀಟದಂತಹ ಬಾಶಿಂಗವನ್ನೇನೋ ಮಾಡಿದೆ. ಆದರೆ ಕಿರೀಟದ ಮೇಲಿನ ಭಾಗದಲ್ಲಿ ಅಳವಡಿಸುವ ನವಿಲುಗರಿ ಹೇಗೆ ಹೊಂದಿಸಲಿ ಎಂದು ಯೋಚಿಸುತ್ತಿರುವಾಗ ಒಂದಷ್ಟು ನವಿಲುಗರಿಯನ್ನು ವಿನುತಾ ಕೊಟ್ಟಳು. ಅವಳು ಶಾಲೆಗೆ ಹೋಗುವಾಗ ಆರಿಸಿಟ್ಟ ನವಿಲುಗರಿಗಳಂತೆ. ವಯಸ್ಸಿನ ಪ್ರಭಾವವೋ, ಆನುವಂಶಿಕವೋ ಅಂತೂ ಹಲವು ನವಿಲುಗರಿಗಳು ಮುಪ್ಪಾಗಿದ್ದವು. ಕೊಟ್ಟಷ್ಟರಲ್ಲಿ ಮೂರು ಗರಿ ಉಪಯೋಗಕ್ಕೆ ಬಂತು. ಅಷ್ಟು ಸಾಲದಲ್ಲ, ಅದಕ್ಕೆ ಪ್ಲಾಸಿಕ್ ಪೊರಕೆಯ ಕಡ್ಡಿಗೆ ಬಣ್ಣ ಬಳಿದು ಕಿರೀಟಕ್ಕೆ ಸಿಕ್ಕಿಸಿದೆ. ನೋಡಿದರೆ ಗೊತ್ತಾಗುವುದಿಲ್ಲ, ಬಚಾವು.
ಎತ್ತಿನ
ಗಾಡಿ, ಊರ ಕಡೆಯ ಮನೆಯ
ಪ್ರತಿಕೃತಿ ಹೀಗೆ ಏನೇನನ್ನೋ ಮಾಡಿದ್ದೇನೆ. ಇನ್ನೂ ಏನನ್ನಾದರೂ ಮಾಡುವ ಉಮೇದಿಯಲ್ಲಿಯೂ ಇದ್ದೇನೆ.
ಕಳೆದ
ಕೆಲವು ದಿನಗಳಿಂದ ಚಿತ್ರ ಬಿಡಿಸುವ ನನ್ನ ಹಳೆಯ ಹವ್ಯಾಸಕ್ಕೆ ತಿರುಗಿದ್ದೇನೆ. ಪ್ರಾರಂಭಿಕ ಪ್ರಯತ್ನಗಳಿಂದ ತಿಳಿದಿರುವುದು "ಕಲಿಯುವುದು ಬಹಳಷ್ಟಿದೆ" ಎಂಬುದು. ಪ್ರಯತ್ನ ಸಾಗಿದೆ.
Excellent. ಪ್ರಯತ್ನ ಹೀಗೆಯೇ ಮುಂದುವರಿಯಲಿ. ನಾವೂ ಇನ್ನೊಂದಿಷ್ಟು ತಿಳಿಯುವಂತಾಗಲಿ.
ReplyDelete👌👌
ReplyDeleteVery nice. Keep it up.
ReplyDeleteSuper Anna.... "Kasadinda rasa"
ReplyDeleteGood creativity...
Mast aajo Suresh , keep it up
ReplyDeleteVery good. Time well spent!
ReplyDeleteLet past welcome you...!!!! All the best.
ReplyDeleteಅಯ್ಯೋ ಲಿಗಾಡಿ ತಡ್ಯಲೇ ಆಗ್ತಾ ಇಲ್ಲೇ
ReplyDeleteBahala chennagi bardidira.
ReplyDelete